ಕರ್ನಾಟಕದಲ್ಲಿ ನಿರ್ವಹಣೆಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ: ಸಚಿವ ಕೆಲವು ಆಫ್ರಿಕನ್ ದೇಶಗಳಲ್ಲಿ ವರದಿಯಾಗಿರುವ ಭಾರತದಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಜನರು ಚಿಂತಿಸಬೇಡಿ... ಬೆಂಗಳೂರು: ಮಾರಕ ಪ್ರಕರಣಗಳ ಉಲ್ಬಣ ವಿಚಾರ ವ್ಯಾಪಕ ಭೀತಿ ಹುಟ್ಟಿಸಿರುವಂತೆಯೇ ಕರ್ನಾಟಕದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, 'ಕೆಲವು ಆಫ್ರಿಕನ್ ದೇಶಗಳಲ್ಲಿ ವರದಿಯಾಗಿರುವ ಭಾರತದಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಜನರು ಚಿಂತಿಸಬೇಡಿ ಎಂದರು.ಅಂತೆಯೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷಾ ಸೌಲಭ್ಯ ತೆರೆಯಲಾಗಿದೆ. ಸೋಂಕುಗಳು ಸಾಮಾನ್ಯವಾಗಿ ಸ್ವಯಂ-ಸೀಮಿತವಾಗಿದ್ದು, ಎರಡು ಮತ್ತು ನಾಲ್ಕು ವಾರಗಳ ನಡುವೆ ಇರುತ್ತದೆ. ಅದರ ರೋಗಿಗಳು ಸಾಮಾನ್ಯವಾಗಿ ಬೆಂಬಲಿತ ವೈದ್ಯಕೀಯ ಆರೈಕೆ ಮತ್ತು ನಿರ್ವಹಣೆಯೊಂದಿಗೆ ಬೇಗ ಚೇತರಿಸಿಕೊಳ್ಳುತ್ತಾರೆ. ಇದು ಸೋಂಕಿತ ರೋಗಿಯೊಂದಿಗೆ ದೀರ್ಘಕಾಲದ ಮತ್ತು ನಿಕಟ ಸಂಪರ್ಕದ ಮೂಲಕ ಹರಡುತ್ತದೆ ಎಂದು ಮಾಹಿತಿ ನೀಡಿದರು.ಅಂತೆಯೇ ನಿರ್ವಹಣೆಗೆ ಕೈಕೊಗೊಂಡ ಕ್ರಮಗಳ ಕುರಿತು ಮಾತನಾಡಿದ ಸಚಿವರು, 'ನಾವು ಇಂದು ಗೆ ಸಿದ್ಧತೆ ಕುರಿತು ಇಲಾಖಾ ಸಭೆ ನಡೆಸಿದ್ದೇವೆ. ಇಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲದ ಕಾರಣ ಆತಂಕ ಪಡುವ ಅಗತ್ಯವಿಲ್ಲ. ಸೋಂಕನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕರ್ನಾಟಕದ ಜನರು ಆತಂಕಪಡುವ ಅಗತ್ಯವಿಲ್ಲ.ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾವು ಉಚಿತ ಪರೀಕ್ಷಾ ಸೌಲಭ್ಯಗಳನ್ನು ಏರ್ಪಡಿಸಿದ್ದೇವೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕೇಂದ್ರ ಸರ್ಕಾರ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ ಆಫ್ರಿಕಾ ಖಂಡದಲ್ಲಿ ಆತಂಕಗೊಳಿಸಿತ್ತಿರುವ 'ಮಂಕಿಪಾಕ್ಸ್' ಬಗ್ಗೆ ಆರೋಗ್ಯ ತುರ್ತು ಪರಿಸ್ಥಿತಿ ಕುರಿತು ಇಂದು ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುದ್ದಿಗೋಷ್ಠಿ ಕೈಗೊಂಡು ಮಾತನಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಆ.14 ರಂದು ಮಂಕಿಪಾಕ್ಸ್ ಕುರಿತು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ… ../